ಭಾರತದ ಕೇಂದ್ರ ಬ್ಯಾಂಕ್ ಆಗಿರುವ Reserve Bank of India (RBI) 2026ರ RBI Assistant Recruitment Notification ಅನ್ನು ಅಧಿಕೃತವಾಗಿ ಪ್ರಕಟಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಪದವೀಧರರಿಗೆ ಇದು ಉತ್ತಮ ಅವಕಾಶವಾಗಿದೆ.
ಈ ಲೇಖನದಲ್ಲಿ RBI Assistant Recruitment 2026 ಅಧಿಸೂಚನೆಯ ಪ್ರಮುಖ ಮಾಹಿತಿ, ಅರ್ಹತೆ, ವೇತನ, ಪರೀಕ್ಷಾ ಮಾದರಿ ಮತ್ತು ಅರ್ಜಿ ವಿಧಾನವನ್ನು ಸರಳ ಹಾಗೂ ನಿಖರವಾಗಿ ವಿವರಿಸಲಾಗಿದೆ. ಇಲ್ಲಿ ನೀಡಿರುವ ಮಾಹಿತಿಯು RBI ಅಧಿಕೃತ ಪ್ರಕಟಣೆ ಆಧಾರಿತವಾಗಿದೆ.
RBI Assistant 2026 ರ ಮುಖ್ಯ ಮಾಹಿತಿ
- ಒಟ್ಟು 650 ಹುದ್ದೆಗಳು ಪ್ರಕಟಿಸಲಾಗಿದೆ.
- ಅರ್ಜಿ ಪ್ರಕ್ರಿಯೆ ಆನ್ಲೈನ್ ಮೂಲಕ ಮಾತ್ರ ನಡೆಯುತ್ತದೆ.
- ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ಕೊನೆಯ ದಿನಾಂಕ: 08 ಮಾರ್ಚ್ 2026
- ಅಧಿಕೃತ ವೆಬ್ಸೈಟ್: rbi.org.in
ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು. ಕೊನೆಯ ದಿನದವರೆಗೆ ಕಾಯುವುದು ಸೂಕ್ತವಲ್ಲ.
ಮುಖ್ಯ ದಿನಾಂಕಗಳು
| ಘಟನೆ | ದಿನಾಂಕ |
|---|---|
| ಅಧಿಸೂಚನೆ ಬಿಡುಗಡೆ | 16 ಫೆಬ್ರವರಿ 2026 |
| ಆನ್ಲೈನ್ ಅರ್ಜಿ ಆರಂಭ | 16 ಫೆಬ್ರವರಿ 2026 |
| ಅರ್ಜಿ ಕೊನೆ ದಿನ | 08 ಮಾರ್ಚ್ 2026 |
| Preliminary ಪರೀಕ್ಷೆ | 11 ಏಪ್ರಿಲ್ 2026 (ತಾತ್ಕಾಲಿಕ) |
| Main ಪರೀಕ್ಷೆ | 07 ಜೂನ್ 2026 (ತಾತ್ಕಾಲಿಕ) |
ಸೂಚನೆ: ಪರೀಕ್ಷಾ ದಿನಾಂಕಗಳನ್ನು RBI ಬದಲಾಯಿಸಬಹುದು ಅದ್ದರಿಂದ ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಿ..
ಅರ್ಜಿ ಹಾಕಲು ಅರ್ಹತೆ ಏನಿರಬೇಕು?
ಶೈಕ್ಷಣಿಕ ಅರ್ಹತೆ
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ.
- ಕನಿಷ್ಠ 50% ಅಂಕಗಳು
- SC/ST/PwBD ಅಭ್ಯರ್ಥಿಗಳಿಗೆ ಪಾಸ್ ಆದರೆ ಸಾಕು.
- ಸಂಬಂಧಿತ ಪ್ರಾದೇಶಿಕ ಭಾಷೆಯಲ್ಲಿ ಓದು, ಬರೆಯುವ ಹಾಗೂ ಮಾತನಾಡುವ ಸಾಮರ್ಥ್ಯ ಹೊಂದಿರಬೇಕು.
RBI Language Proficiency Test (LPT) ಮೂಲಕ ಸ್ಥಳೀಯ ಭಾಷಾ ಜ್ಞಾನವನ್ನು ಪರಿಶೀಲಿಸಲಗುತ್ತದೆ.
ವಯೋಮಿತಿ
- ಕನಿಷ್ಠ: 20 ವರ್ಷ
- ಗರಿಷ್ಠ: 28 ವರ್ಷ
- SC/ST/OBC/PwBD/Ex-Servicemen ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ನಿಯಮಾನುಸಾರ ವಯೋಮಿತಿ ರಿಯಾಯಿತಿ ಇರುತ್ತದೆ.
ವಯೋಮಿತಿ ಲೆಕ್ಕಾಚಾರವನ್ನು ಅಧಿಸೂಚನೆಯಲ್ಲಿ ಸೂಚಿಸಿರುವ cut-off ದಿನಾಂಕದ ಆಧಾರದ ಮೇಲೆ ಪರಿಶೀಲಿಸಬೇಕು.
ವೇತನ ಮತ್ತು ಸೌಲಭ್ಯಗಳು
RBI Assistant ಹುದ್ದೆಗೆ ಆಕರ್ಷಕ ವೇತನ ನೀಡಲಾಗುತ್ತದೆ.
- ಪ್ರಾರಂಭಿಕ Gross Salary ಸುಮಾರು ₹58,000 – ₹60,000 (ಪೋಸ್ಟಿಂಗ್ ನಗರ ಆಧಾರಿತ).
- Basic Pay + Dearness Allowance (DA) + HRA + Transport Allowance.
- ವೈದ್ಯಕೀಯ ಸೌಲಭ್ಯಗಳು.
- ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳು.
RBI ನಲ್ಲಿನ ಉದ್ಯೋಗವು ಸ್ಥಿರತೆ, ಉತ್ತಮ ವೇತನ ಮತ್ತು ವೃತ್ತಿ ಬೆಳವಣಿಗೆಗಾಗಿ ಪ್ರಸಿದ್ಧವಾಗಿದೆ.
ಆಯ್ಕೆ ಪ್ರಕ್ರಿಯೆ
RBI Assistant Recruitment 2026 ಆಯ್ಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯುತ್ತದೆ:
- Preliminary Examination
- Main Examination
- Language Proficiency Test (LPT)
ಪ್ರತಿ ಹಂತದಲ್ಲಿ ಕನಿಷ್ಠ ಅರ್ಹತಾ ಅಂಕಗಳನ್ನು ಪಡೆಯಬೇಕು.
ಪರೀಕ್ಷಾ ಮಾದರಿ
Preliminary Exam
- English Language
- Numerical Ability
- Reasoning Ability
- ಒಟ್ಟು: 100 ಅಂಕಗಳು
- ಸಮಯ: 60 ನಿಮಿಷ.
- Negative Marking ಅನ್ವಯಿಸುತ್ತದೆ.
Main Exam
- Reasoning
- English Language
- Quantitative Aptitude
- General Awareness
- Computer Knowledge
- ಒಟ್ಟು: 200 ಅಂಕಗಳು
Main ಪರೀಕ್ಷೆಯಲ್ಲಿ General Awareness ವಿಭಾಗ ಮಹತ್ವದ್ದು. ಆರ್ಥಿಕತೆ, RBI ನೀತಿಗಳು ಮತ್ತು ಇತ್ತೀಚಿನ ಆರ್ಥಿಕ ಸುದ್ದಿಗಳನ್ನು ಚೆನ್ನಾಗಿ ಓದುವುದು ಒಳ್ಳೆಯದು.
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು:
- rbi.org.in ತೆರೆಯಿರಿ.
- “Opportunities @ RBI” ವಿಭಾಗಕ್ಕೆ ಹೋಗಿ.
- RBI Assistant Recruitment 2026 ಲಿಂಕ್ ಕ್ಲಿಕ್ ಮಾಡಿ.
- ಹೊಸ ನೋಂದಣಿ ಮಾಡಿ.
- ಅರ್ಜಿ ಫಾರ್ಮ್ ಭರ್ತಿ ಮಾಡಿ.
- ಫೋಟೋ ಮತ್ತು ಸಹಿ ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕ ಪಾವತಿಸಿ.
- ಅರ್ಜಿ ಸಲ್ಲಿಸಿ ನಂತರ ಸಲ್ಲಿಸಿದ ಅರ್ಜಿ ಮತ್ತು ಶುಲ್ಕ ಪಾವತಿಸಿದ ರಶೀದಿಯ pdf ಪ್ರತಿಯನ್ನು ಸೇವ್ ಮಾಡಿಕೊಂಡು ಇಟ್ಟುಕೊಳ್ಳಿ ಮುಂದೆ ಉಪಯೋಗಕ್ಕೆ ಬರುತ್ತದೆ.
ಸಲಹೆ: ಕೊನೆಯದಾಗಿ Submit ಮಾಡುವ ಮೊದಲು ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ.
ಸಾಮಾನ್ಯ ಪ್ರಶ್ನೆಗಳು (FAQs)
Q1. RBI Assistant 2026ಕ್ಕೆ ಎಷ್ಟು ಹುದ್ದೆಗಳು ಇವೆ?
ಉ: ಒಟ್ಟು 650 ಹುದ್ದೆಗಳನ್ನು ಪ್ರಕಟಿಸಲಾಗಿದೆ.
Q2. ಅರ್ಜಿ ಹಾಕಲು ಕೊನೆ ದಿನಾಂಕ ಯಾವುದು?
ಉ: 08 ಮಾರ್ಚ್ 2026.
Q3. ಪರೀಕ್ಷೆ ಯಾವಾಗ ನಡೆಯುತ್ತದೆ?
ಉ: Prelims – 11 ಏಪ್ರಿಲ್ 2026 (ತಾತ್ಕಾಲಿಕ)
Mains – 07 ಜೂನ್ 2026 (ತಾತ್ಕಾಲಿಕ)
ನಮ್ಮ ಅನಿಸಿಕೆ
RBI Assistant Recruitment 2026 Notification ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಉತ್ತಮ ಅವಕಾಶವಾಗಿದೆ. ಇದರಲ್ಲಿ ಸ್ಪರ್ಧೆ ಹೆಚ್ಚು ಇರುತ್ತದೆ. ಆದ್ದರಿಂದ ಸರಿಯಾದ ರೀತಿಯ ಯೋಜನೆ ಮಾಡಿಕೊಂಡು, ನಿಯಮಿತ ಅಭ್ಯಾಸವನ್ನು ಮಾಡಬೇಕು ಮತ್ತು ಸಮಯ ನಿರ್ವಹಣೆ ಅಗತ್ಯತೆಯನ್ನು ತಿಳಿದು ಪರೀಕ್ಷಾ ತಯಾರಿ ಮಾಡಬೇಕು.
ಅಧಿಕೃತ ಮಾಹಿತಿಗಾಗಿ RBI ವೆಬ್ಸೈಟ್ ಅನ್ನು ಪರಿಶೀಲಿಸಿ. ನಂತರ ಅರ್ಜಿ ಸಲ್ಲಿಸಿ.
ಬ್ಯಾಂಕ್ ಉದ್ಯೋಗದ ಕನಸನ್ನು ನಿಜಗೊಳಿಸಲು ಇಂದಿನಿಂದಲೇ ತಯಾರಿ ಶುರು ಮಾಡಿ.
ಇಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ WhatsAap ಗ್ರೂಪ್ ಗೆ ಜಾಯಿನ್ ಆಗಿ.
ಧನ್ಯವಾದಗಳು.